Work sheet ಸಾಧ್ಯತೆಗಳು, ಸರಪೋಳಿ, ಕಾಮನಬಿಲ್ಲು(ಚಟುವಟಿಕೆಗಳು) ಪೂರಕ ಮಾಹಿತಿಯಲ್ಲಿ ಲಭ್ಯವಿದೆ

Friday 9 October 2015





 ಹೊಸ ಪಠ್ಯ ಪದ್ಧತಿಯಲ್ಲಿ ವಿದ್ಯಾರ್ಥಿಯಲ್ಲಿ ಜ್ಞಾನದ ಪೋಷಣೆಯೇ ಪ್ರಧಾನವಾದ ಉದ್ದೇಶವಾಗಿದೆ.ಇದಕ್ಕಾಗಿ ವಿದ್ಯಾರ್ಥಿಯಲ್ಲಿ ದೈಹಿಕ ಮತ್ತು ಮಾನಸಿಕ ಸಿದ್ಧತೆಯನ್ನು ಉಂಟುಮಾಡಬೇಕು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ವಿದ್ಯಾರ್ಥಿಯ ಜ್ಞಾನದ ಬೆಳವಣಿಗೆಯಲ್ಲಿ ಪಾಠ ಯೋಜನೆಯ ಪಾತ್ರ ಮಹತ್ತರವಾಗಿದೆ. ಇದರಿಂದ ಮಗುವು ಅನೇಕ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜ್ವ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಮಗುವಿಗೆ ಮಾನಸಿಕ ಸಂತುಲನವು ದೊರಕುತ್ತದೆ.
    ಕಲಿಕೆಯ ಹಂತದಲ್ಲಿ ಮಗುವಿಗೆ ವಿವಿಧ ಸಲಕರಣೆಗಳ ಆವಶ್ಯಕತೆ ಇದೆ. ಅವುಗಳಲ್ಲಿ ಕೆಲವು ಕಲಿಕೋಪಕರಣಗಳು,ಡಿಜಿಟಲ್ ಕಂಟೆಟುಗಳು ಇಲ್ಲಿ ಪ್ರಮುಖವಾಗಿವೆ. ಡಿಜಿಟಲ್ ಕಂಟೆಟುಗಳು ವೀಡಿಯೋ,ಪ್ರಸೆಂಟೇಶನ್ ಚಿತ್ರಗಳು,ಕೊಲ್ಯಾಶ್‌ವರ್ಕ್‌‌ಶೀಟ್ಎನಿಮೇಶನ್‌ಗಳ ರೂಪದಲ್ಲೋ ಇದ್ದರೆ ಮಕ್ಕಳಲ್ಲಿ ಕುತೂಹಲ ಹಾಗು ಪಾಲ್ಗೊಳ್ಳುವಿಕೆಯನ್ನು ವೃದ್ಧಿಸುತ್ತದೆ. ನೇರವಾಗಿ ಕೆಲವೊಮ್ಮೆ ಅನುಭವಗಳನ್ನು ವಿದ್ಯಾರ್ಥಿಗೆ ಕೊಡಲು ಸಾಧ್ಯವಾಗದು. ಇದಕ್ಕಾಗಿ ಐ.ಸಿ.ಟಿ ಸಾಮಾಗ್ರಿಗಳು ಪರ್ಯಾಯವಾಗಿವೆ.
    ಆದರೆ ನಮ್ಮಲ್ಲಿ ಕೆಲವು ಶಿಕ್ಷಕರು ತರಗತಿಯ ಮಟ್ಟದಲ್ಲಿ ಐ.ಸಿ.ಟಿ ಸಾಮಾಗ್ರಿಗಳನ್ನು ಒಟ್ಟು ಸೇರಿಸುವುದಕ್ಕೂ ರಚಿಸುವುದಕ್ಕೂ ಪರಿಣಾಮಕಾರಿಯಾಗಿ ಬಳಸುವುದಕ್ಕೆ ಹಿಂಜರಿಯುತ್ತಾರೆ. ಕೆಲವರು ನಿರ್ಲಕ್ಷ್ಯಭಾವವನ್ನು ತೋರಿಸಿ ಅತ್ತ ಮುಖ ಕೂಡ ಹಾಕುವುದಿಲ್ಲ. ಅಂತಹ ಶಿಕ್ಷಕರಿಗೆ ಬಳಸಲು ಸಹಕಾರಿಯಾಗುವಂತೆ ಐ.ಸಿ.ಟಿ ಸಾಮಾಗ್ರಿಗಳನ್ನು ಲಭ್ಯವಾಗುವಂತೆ ಮಾಡಿದರೆ ಉತ್ತಮವಲ್ಲವೇ.
     ಕಳೆದ ವರ್ಷ ಇದಕ್ಕಾಗಿ ನಡೆಸಿದ ಪ್ರಯತ್ನದ ಫಲವಾಗಿ ಐ.ಸಿ.ಟಿ ಸಾಮಾಗ್ರಿಗಳನ್ನು 10 ಮತ್ತು 7 ನೇ ತರಗತಿಗಳಿಗೆ “SMART@10” ಹಾಗು “LASER” ಡಿವಿಡಿಗಳು ರಚನೆಯಾಯಿತು. ಅಧ್ಯಾಪಕ ಸಮೂಹವು ಇದರ ಸದುಪಯೋಗವನ್ನು ಪಡೆದಿದೆ.
     ಈ ವರ್ಷಾರಂಭದಲ್ಲಿ ಡಯೆಟ್ ಮತ್ತು IT@School ನ ಸಹಯೋಗದೊಂದಿಗೆ ಇನ್ನಷ್ಟೂ ವಿಸ್ತರಿಸಲು ಕೈಗೊಂಡ ಕಾರ್ಯಕ್ರಮ “BLEND” ಬ್ಲೋಗುಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಯಿತು. ಇದಕ್ಕಾಗಿ ತಾಂತ್ರಿಕವಾಗಿ ನುರಿತ ಅಧ್ಯಾಪಕರ ಸೇವೆಯನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದು ಕಾಸರಗೋಡು ಜಿಲ್ಲಾ ಶಿಕ್ಷಣ ಸಮಿತಿಯ ನೇತೃತ್ವದಲ್ಲಿ ನಡೆಯಿತು. ಕೇರಳದ ಐ.ಸಿ.ಟಿ ಆಧಾರಿತ ಶಿಕ್ಷಣದಲ್ಲಿ ಇದೊಂದು ಹೊಸ ಮೈಲುಗಲ್ಲಾಗಿ ಮಾರ್ಪಟ್ಟಿತು.
     ಹೊಸ ಕಾರ್ಯಕ್ರಮ “TERMS” (E-Resource Management for School Teachers) ಪ್ರತಿ ತರಗತಿಯ ವಿಷಯಗಳಿಗೂ ಐಸಿಟಿ ಸಾಮಾಗ್ರಿಯ ಲಭ್ಯತೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿದೆ. ವಿವಿಧ ಭಾಗಗಳಿಂದ ಶೇಖರಿಸಲ್ಪಟ್ಟವುಗಳು ಹಾಗೂ ನಮ್ಮಲ್ಲಿನ ನುರಿತ ಅಧ್ಯಾಪಕರಿಂದಲೇ ತಯಾರಿಸಲ್ಪಟ್ಟ ಕಲಿಕಾ ಸಾಮಗ್ರಿಗಳಾಗಿವೆ ಇದರಲ್ಲಿ ಒಳಗೊಂಡಿರುವುದು. ಅಧ್ಯಾಪಕರು ಇವುಗಳನ್ನು ಸ್ವೀಕರಿಸಬಹುದು ಹಾಗು ಅವುಗಳನ್ನು ಡೌನ್‌‌ಲೋಡ್ ಮಾಡಿ ಪರಿಣಾಮಕಾರಿಯಾಗಿ ತರಗತಿಯಲ್ಲಿ ಬಳಸಬಹುದು.ಅದೇ ರೀತಿಯಲ್ಲಿ ಪಾಠಪುಸ್ತಕ ಹಾಗು ಅಧ್ಯಾಪಕರ ಪಠ್ಯಗಳಿಗೆ ಲಿಂಕನ್ನು ಕೊಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಅಧ್ಯಾಪಕರಿಗೆ ಸಹಕಾರಿಯಾಗುವಂಥಹ ಪಾಠಯೋಜನೆಗಳುಮೌಲ್ಯಮಾಪನ ಸಾಮಗ್ರಿಗಳುಇತರ ಕಲಿಕಾ ಸಾಮಗ್ರಿಗಳನ್ನು ಲಭ್ಯವಾಗುವಂತೆ ಮಾಡಲು ಇತರ ವೆಬ್‌‌ಸೈಟುಗಳು ಹಾಗು ಎಜುಬ್ಲೋಗುಗಳಿಗೆ ಲಿಂಕನ್ನು ಕೊಡಲಾಗುವುದು.
     ಯಾರಿಗೂ ತಮ್ಮ ಐ.ಸಿ.ಟಿ ಕಲಿಕಾ ಸಾಮಾಗ್ರಿಗಳನ್ನು ಕಳುಹಿಸಿ ಈ ಬೃಹತ್ ಯೋಜನೆಯಲ್ಲಿ ಪಾಲುದಾರರಾಗಬಹುದು ಹಾಗು ನಮ್ಮೊಂದಿಗೆ ಸಹಕರಿಸಬಹುದು. ನಿಮಗೆ ಯಾವುದೇ ಮಾಹಿತಿ ಬೇಕಾದರೆ ನಮ್ಮ ಇ-ಮೈಲ್‌ಗೆ ಸಂಪರ್ಕಿಸಬಹುದು ಹಾಗು ಮಾಹಿತಿಯನ್ನು ಹಂಚಿಕೊಳ್ಳಬಹುದು. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕವಾದ ಬ್ಲೋಗುಗಳಿವೆ. ಇವುಗಳಲ್ಲಿ ಅವುಗಳನ್ನು ಸೇರಿಸಬಹುದು. ನಿಮ್ಮ ಅತಿ ಸೂಕ್ತವಾದ ಬೆಲೆಬಾಳುವ ಅಭಿಪ್ರಾಯ ಮತ್ತು ಸಲಹೆಗಳಿಗೆ ಸ್ವಾಗತ.


      ಅಭಿಮಾನಪೂರ್ವಕವಾಗಿ ಸಾದರಪಡಿಸುವ ಈ ಯೋಜನೆಯು ಅಧ್ಯಾಪಕರ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ.. ನುರಿತ ಅಧ್ಯಾಪಕರ ತಂಡದ ಹಾಗು ಕಾಸರಗೋಡಿನ ಶೈಕ್ಷಣಿಕ ಅಧಿಕಾರಿಗಳ  ಸಹಕಾರವು ಇದರಲ್ಲಿ ಅಡಗಿದೆ.